FAQs – Kannada | Admission to Karnataka Students at NLSIU
January 21, 2023
ಎನ್‌ಎಲ್‌ಎಸ್ ಐಯು ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತದೆಯೇ?
ಹೌದು. 1988 ರ ಮೊದಲ ಬ್ಯಾಚ್‌ನಿಂದಲೂ , ಎನ್‌ಎಲ್‌ಎಸ್‌ಐಯು ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ಆಧಾರದ ಮೇಲೆ ಕರ್ನಾಟಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದೆ.
ಎನ್‌ಎಲ್‌ಎಸ್ ಐಯು ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇಕಡ 25 ರಷ್ಟು ಸೀಟುಗಳನ್ನು ಕಾಯ್ದಿರಿಸುತ್ತದೆಯೇ?
ಹೌದು. ಎನ್ ಎಲ್ ಎಸ್ ಐ ಯು ಕರ್ನಾಟಕದ ವಿದ್ಯಾರ್ಥಿಗಳಿಗೆ ಸಮತಲ ಮೀಸಲಾತಿಯ ಮೂಲಕ ಶೇಕಡ 25 ರಷ್ಟು ಸೀಟುಗಳನ್ನು ಕಾಯ್ದಿರಿಸಿದೆ. 2021 ರಿಂದ, ವಿಶ್ವವಿದ್ಯಾನಿಲಯವು ಒಳಗೊಳ್ಳುವಿಕೆ ಮತ್ತು ವಿಸ್ತರಣೆ ಯೋಜನೆ 2021-25 ರ ಅಡಿಯಲ್ಲಿ ಕರ್ನಾಟಕ ವಿದ್ಯಾರ್ಥಿಗಳಿಗೆ ಶೇಕಡ 25 ರಷ್ಟು ವಿಭಾಗೀಯ ಸಮತಲ ಮೀಸಲಾತಿಯನ್ನು ಸ್ವಯಂಪ್ರೇರಣೆಯಿಂದ ಅಳವಡಿಸಿಕೊಂಡಿದೆ. ಇದಕ್ಕೂ ಮೊದಲು, 1988 ಮತ್ತು 2020 ರ ನಡುವೆ ಎನ್‌ಎಲ್‌ಎಸ್ ಐಯು ನಲ್ಲಿ ಕರ್ನಾಟಕ ವಿದ್ಯಾರ್ಥಿಗಳಿಗೆ ಯಾವುದೇ ಮೀಸಲಾತಿ ನೀತಿ ಜಾರಿಯಲ್ಲಿರಲಿಲ್ಲ.
2021 ರಿಂದ ಎನ್ ಎಲ್ ಎಸ್ ಐ ಯು ನಲ್ಲಿ ಎಷ್ಟು ಕರ್ನಾಟಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ?
ಎನ್‌ಎಲ್‌ಎಸ್ ಐಯು ನಲ್ಲಿ ಗರಿಷ್ಠ ಸಂಖ್ಯೆಯ ಕರ್ನಾಟಕ ವಿದ್ಯಾರ್ಥಿಗಳ ಒಟ್ಟು ಸೀಟುಗಳನ್ನು ಶೇಕಡ 25ಕ್ಕೆ ನಿರ್ಬಂಧಿಸಲಾಗಿದೆಯೇ?
ಇಲ್ಲ. ಎನ್‌ಎಲ್‌ಎಸ್ ಐಯು ಗೆ ಪ್ರವೇಶ ಪಡೆದ ಕರ್ನಾಟಕದ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯ ಮೇಲೆ ಯಾವುದೇ ಮಿತಿಯಿಲ್ಲ. ವಿಶ್ವವಿದ್ಯಾನಿಲಯವು ನಮ್ಮ ಕಾರ್ಯಕ್ರಮಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಲ್ಲಿ ಕನಿಷ್ಠ ಶೇಕಡ 25 ಕರ್ನಾಟಕ ವಿದ್ಯಾರ್ಥಿಗಳಿರುವುದನ್ನು ಖಚಿತಪಡಿಸುತ್ತದೆ. ಎನ್ ಎಲ್ ಎಸ್ ಐ ಯು ನ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯಲ್ಲಿನ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ, ಯಾವುದೇ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯ ಕರ್ನಾಟಕ ವಿದ್ಯಾರ್ಥಿಗಳು ಎನ್‌ಎಲ್‌ಎಸ್‌ಐಯು ನಲ್ಲಿ ಪ್ರವೇಶ ಪಡೆಯಬಹುದು.
ಎನ್‌ಎಲ್‌ಎಸ್ ಐಯು 21ನೇ ಮಾರ್ಚ್ 2021 ರಂದು ನಡೆದ ತನ್ನ ಕಾರ್ಯಕಾರಿ ಮಂಡಳಿಯು ಸಭೆಯಲ್ಲಿ ಏನನ್ನು ಅನುಮೋದಿಸಿತು?
ಈ ಸಭೆಯಲ್ಲಿ ಎನ್ ಎಲ್ ಎಸ್ ಐ ಯು ಕಾರ್ಯಕಾರಿ ಮಂಡಳಿಯು ಕರ್ನಾಟಕ ವಿದ್ಯಾರ್ಥಿಗಳಿಗೆ ಶೇಕಡ 25 ರಷ್ಟು ವಿಭಾಗೀಯ ಸಮತಲ ಮೀಸಲಾತಿಯನ್ನು ಒದಗಿಸುವ ಒಳಗೊಳ್ಳುವಿಕೆ ಮತ್ತು ವಿಸ್ತರಣೆ ಯೋಜನೆಯನ್ನು ಅಂಗೀಕರಿಸಿತು. ಇದನ್ನು ನಂತರ ಜನರಲ್ ಕೌನ್ಸಿಲ್‌ನಲ್ಲಿ ಅನುಮೋದಿಸಲಾಯಿತು. ಯಾವುದೇ ಲಂಬ ವರ್ಗಗಳಿಂದ ಕರ್ನಾಟಕದ ವಿದ್ಯಾರ್ಥಿಗಳನ್ನು ಹೊರಗಿಡಲು ಆಡಳಿತ ಮಂಡಳಿಗಳು ಎನ್ ಎಲ್ ಎಸ್ ಐ ಯು ಗೆ ನಿರ್ದೇಶನ ನೀಡಿಲ್ಲ.
ಎನ್ ಎಲ್ ಎಸ್ ಐ ಯು ಅದರ ಆಡಳಿತ ಮಂಡಳಿಗಳು ಅನುಮೋದಿಸಿದ ಮೀಸಲಾತಿ ನೀತಿಯನ್ನು ಅನುಸರಿಸುತ್ತಿದೆಯೇ?
ಹೌದು. ಎನ್‌ಎಲ್‌ಎಸ್‌ಐಯು ಕಾರ್ಯನಿರ್ವಾಹಕ ಮಂಡಳಿಯು “ಒಳಗೊಳ್ಳುವಿಕೆ ಮತ್ತು ವಿಸ್ತರಣೆ ಯೋಜನೆ 2021-25” ಎಂಬ ಹೆಸರಿನಲ್ಲಿ ಜನರಲ್ ಕೌನ್ಸಿಲ್‌ನಲ್ಲಿ ಅನುಮೋದಿಸಿದಮೀಸಲಾತಿ ನೀತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿದೆ ಮತ್ತು ಅಳವಡಿಸಿಕೊಂಡಿದೆ.
ಎನ್‌ಎಲ್‌ಎಸ್‌ಐಯು ಕರ್ನಾಟಕ ವಿದ್ಯಾರ್ಥಿ ಮೀಸಲಾತಿಯ ಮಾನದಂಡಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದೆಯೇ?
ಹೌದು. ವಿಶ್ವವಿದ್ಯಾನಿಲಯವು 2021, 2022 ಮತ್ತು 2023 ರಲ್ಲಿನ ಪ್ರವೇಶ ಅಧಿಸೂಚನೆಗಳಲ್ಲಿ ಕರ್ನಾಟಕ ವಿದ್ಯಾರ್ಥಿಗಳ ಮೀಸಲಾತಿಯ ಮಾನದಂಡಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದೆ. ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ(CLAT) ಫಲಿತಾಂಶಗಳನ್ನು ಸಹ ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ. ಕರ್ನಾಟಕ ವಿದ್ಯಾರ್ಥಿಗಳಿಗೆ ಶೇಕಡ 25% ಸಮತಲ ಮೀಸಲಾತಿ ನೀತಿಯನ್ನು 2021 ಮತ್ತು 2022 ರ ಶೈಕ್ಷಣಿಕ ವರ್ಷಗಳಲ್ಲಿಯೂ ಕೈಗೊಳ್ಳಲಾಗಿದೆ.
ಮುಂಬರುವ ವರ್ಷಗಳಲ್ಲಿ ಎನ್‌ಎಲ್‌ಎಸ್‌ಐಯು ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಸಂಖ್ಯೆ ವಿಸ್ತರಿಸುತ್ತದೆಯೇ?
ಹೌದು. 2024-25ರ ಶೈಕ್ಷಣಿಕ ವರ್ಷದಿಂದ ಕರ್ನಾಟಕದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ಒಟ್ಟಾರೆ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳಕ್ಕೆ ಅನುಗುಣವಾಗಿ ಪ್ರತೀ ವರ್ಷ 135 ಕರ್ನಾಟಕ ವಿದ್ಯಾರ್ಥಿಗಳನ್ನು ಎನ್‌ಎಲ್‌ಎಸ್‌ಐಯು ಗೆ ಸೇರಿಸಿಕೊಳ್ಳಲಾಗುತ್ತದೆ. 2026-27ರ ಶೈಕ್ಷಣಿಕ ವರ್ಷದ ವೇಳೆಗೆ, ವಿಶ್ವವಿದ್ಯಾನಿಲಯದ ಒಳಗೊಳ್ಳುವಿಕೆ ಮತ್ತು ವಿಸ್ತರಣಾ ಯೋಜನೆಯ ಅಡಿಯಲ್ಲಿ, ವಿಶ್ವವಿದ್ಯಾನಿಲಯದಲ್ಲಿ ಕಾನೂನು ಕಾರ್ಯಕ್ರಮಗಳನ್ನು ಕಲಿಯುತ್ತಿರುವ ಕರ್ನಾಟಕ ವಿದ್ಯಾರ್ಥಿಗಳ ಕನಿಷ್ಠ ಸಂಖ್ಯೆಯು ಸುಮಾರು 500 ವಿದ್ಯಾರ್ಥಿಗಳಿಗೆ ಹೆಚ್ಚು ಮಾಡುವ ಉದ್ದೇಶವಿದೆ.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ (ತಿದ್ದುಪಡಿ) ಕಾಯ್ದೆ, 2020 ಯಾವುದು?
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಕಾಯ್ದೆ, 1986ನ್ನು ತಿದ್ದುಪಡಿಸಲು ಏಪ್ರಿಲ್ 27, 2020ರಂದು ಕರ್ನಾಟಕ ಸರ್ಕಾರವು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ (ತಿದ್ದುಪಡಿ) ಕಾಯ್ದೆ, 2020ನ್ನು ಜಾರಿಗೊಳಿಸಿತು. ಇದರ ಗುರಿ ಮತ್ತು ಕಾರಣಗಳ ಹೇಳಿಕೆಯು “ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ 25% ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಡಲಾಗುವುದು” ಎಂದು ಹೇಳುತ್ತದೆ.
ಈ ಕೆಳಗೆ ನೀಡಿರುವ ಹೊಸ ಪರಿಚ್ಛೇದ 4(3) ಅನ್ನು ತಿದ್ದುಪಡಿ ಕಾಯ್ದೆ ಸೇರಿಸಿತು: (3) ಈ ಕಾಯ್ದೆಯಲ್ಲಿ ಹಾಗು ಇದರ ಅಡಿಯಲ್ಲಿ ಮಾಡಿದ ಯಾವುದೇ ನಿಯಮಗಳನ್ನು ಪರಿಗಣಿಸದೇ, ಕರ್ನಾಟಕದ ವಿದ್ಯಾರ್ಥಿಗಳಿಗೆ ಇಪ್ಪತ್ತೈದು ಪ್ರತಿಶತ ಸೀಟುಗಳನ್ನು ಸಮತಲವಾಗಿ ಸ್ಕೂಲ್ ಮೀಸಲಿಡಲಾಗುವುದು.
“ಕರ್ನಾಟಕದ ವಿದ್ಯಾರ್ಥಿ” ಎಂದರೆ ರಾಜ್ಯದ ಯಾವುದೇ ಗುರುತಿಸಲಾದ ಶೈಕ್ಷಣಿಕ ಸಂಸ್ಥೆಗಳಲ್ಲಿ ಅರ್ಹತಾ ಪರೀಕ್ಷೆಗೆ ಮುನ್ನ ಹತ್ತು ವರ್ಷಗಳಿಗಿಂತ ಕಡಿಮೆಯಲ್ಲದ ಅವಧಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿ ಎಂದು ಈ ಪರಿಚ್ಛೇದ ವ್ಯಾಖ್ಯಾನಿಸುತ್ತದೆ. ಇಂದು, ನ್ಯಾಷನಲ್ ಲಾ ಸ್ಕೂಲ್ (ತಿದ್ದುಪಡಿ) ಕಾಯ್ದೆ, 2020 ಈ ವಿಷಯಕ್ಕೆ ಅನ್ವಯಿಸುವುದಿಲ್ಲ.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ (ತಿದ್ದುಪಡಿ) ಕಾಯ್ದೆ, 2020 ಈ ದಿನಕ್ಕೆ ಅನ್ವಯಿಸಬಹುದೇ?
ಇಲ್ಲ. ಮಾಸ್ಟರ್ ಬಾಲಚಂದರ್ ವಿರುದ್ಧ ಕರ್ನಾಟಕ ರಾಜ್ಯ ಮತ್ತು ಇತರರು (W.P. Nos. 8788, 8951 ಮತ್ತು 9145 ಆಫ್ 2020) ಅಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ಸೆಪ್ಟಂಬರ್ 29, 2020ರಂದು ನೀಡಿದ ತೀರ್ಪಿನಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ (ತಿದ್ದುಪಡಿ) ಕಾಯ್ದೆ, 2020ನ್ನು ಅಮಾನ್ಯವೆಂದು ತೀರ್ಪು ನೀಡಿತು. ಈ ತೀರ್ಪಿನ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ ಮಾಡಿರುವ ಮೊರೆಯನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯ ಆಲಿಸುತ್ತಿದೆ. ಇದುವರೆಗೂ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಈ ಕುರಿತು ಯಾವುದೇ ಆದೇಶಗಳನ್ನು ನೀಡಿಲ್ಲ. ಇಂದು, ಎನ್.ಎಲ್.ಎಸ್.ಐ.ಯು ಅಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ಕುರಿತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ (ತಿದ್ದುಪಡಿ) ಕಾಯ್ದೆ, 2020 ಅನ್ವಯವಾಗುವ ಕಾನೂನಲ್ಲ.
ಎನ್.ಎಲ್.ಎಸ್.ಐ.ಯುವಿನ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ವಯವಾಗುವ ಮೀಸಲಾತಿ ನೀತಿಯ ಅನುಷ್ಠಾನವನ್ನು ಕಾನೂನಾತ್ಮಕವಾಗಿ ಕಾನೂನಾತ್ಮಕವಾಗಿ ಸವಾಲು ಮಾಡಲಾಗಿದೆಯೇ?
ಇಲ್ಲ. ತನ್ನ ಒಳಗೊಳ್ಳುವಿಕೆ ಹಾಗು ವಿಸ್ತರಣೆ ಯೋಜನೆಯ ಅಡಿಯಲ್ಲಿರುವ ಮೀಸಲಾತಿ ನೀತಿಯನ್ನು ಎನ್.ಎಲ್.ಎಸ್.ಐ.ಯು 2021ರಲ್ಲಿ ಅನುಷ್ಠಾನ ಮಾಡಲಾರಂಭಿಸಿತು ಹಾಗು ಅಂದಿನಿಂದ ಅದನ್ನು ಯಾವುದೇ ಕಾರಣದಿಂದಾಗಿ ಸವಾಲು ಮಾಡಲಾಗಿಲ್ಲ. ಬೇರೆ ಯಾವುದೇ ಕಾಳಜಿಗಳನ್ನು ಯಾವುದೇ ಮಧ್ಯಸ್ಥಗಾರರು ವಿಶ್ವವಿದ್ಯಾಲಯಕ್ಕೆ ಸೂಚಿಸಿಲ್ಲ. 2021ರಿಂದ ಎಲ್ಲ ಶೈಕ್ಷಣಿಕ ವರ್ಷಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ 25% ಸಮತಲ ಮೀಸಲಾತಿಯನ್ನು, ಮೀಸಲಾತಿ ನೀತಿಯ ಮೂಲಕ ಅನ್ವಯಿಸಲಾಗಿದೆ.
ಎನ್.ಎಲ್.ಎಸ್.ಐ.ಯು ಅಲ್ಲಿ ಕರ್ನಾಟಕ ವಿದ್ಯಾರ್ಥಿಗಳಿಗೆ ಮೀಸಲಾತಿ ಸಮತಲವೇ ಅಥವ ಲಂಬವೇ?
ಕರ್ನಾಟಕದ ವಿದ್ಯಾರ್ಥಿಗಳಿಗೆ ಎನ್.ಲ್.ಎಸ್.ಐ.ಯು ಅಲ್ಲಿ 25% ವಿಭಾಗೀಕರಿಸಲಾದ ಸಮತಲ ಮೀಸಲಾತಿಯನ್ನು ನೀಡಲಾಗುತ್ತದೆ. ಏಪ್ರಿಲ್ 17, 2021ರಂದು, ಎನ್.ಎಲ್.ಎಸ್.ಐ.ಯುವಿನ ಆಡಳಿತ ಮಂಡಳಿಗಳು “ಎನ್.ಎಲ್.ಎಸ್.ಐ.ಯು ಒಳಗೊಳ್ಳುವಿಕೆ ಮತ್ತು ವಿಸ್ತರಣೆ ಯೋಜನೆ 2021-2025”ಅನ್ನು ಅಳವಡಿಸಿಕೊಂಡಿತು. ಈ ಯೋಜನೆಯನ್ವಯ, ಎನ್.ಎಲ್.ಎಸ್.ಐ.ಯು, ಶೈಕ್ಷಣಿಕ ವರ್ಷ 2021-22ರಿಂದ ಕರ್ನಾಟಕದ ವಿದ್ಯಾರ್ಥಿಗಳಗೆ 25% ವಿಭಾಗೀಕರಿಸಿದ ಸಮತಲ ಮೀಸಲಾತಿಯನ್ನು ಸ್ವಯಂಪ್ರೇರಿತವಾಗಿ ಅಳವಡಿಸಿಕೊಂಡಿತು.
ಕರ್ನಾಟಕ ರಾಜ್ಯ ಕಾನೂನಿನ್ವಯ ಲಂಬ ಮೀಸಲಾತಿ ಕಡ್ಡಾಯವೇ?
ಇಲ್ಲ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ (ತಿದ್ದುಪಡಿ) ಕಾಯ್ದೆ, 2020 ಸಮತಲ ಮೀಸಲಾತಿಯನ್ನು ಮಾತ್ರ ಸೂಚಿಸುತ್ತದೆ ಹಾಗು ಲಂಬ ಮೀಸಲಾತಿಯನ್ನು ಆದೇಶಿಸುವುದಿಲ್ಲ.
ಎನ್.ಎಲ್.ಎಸ್.ಐ.ಯುವಿನ ಆಡಳಿತ ಮಂಡಳಿಗಳ ನಿರ್ಣಯಗಳನ್ವಯ ಲಂಬ ಮೀಸಲಾತಿ ಕಡ್ಡಾಯವೇ?
ಇಲ್ಲ. ಎನ್.ಎಲ್.ಎಸ್.ಐ.ಯುವಿನ ಕಾರ್ಯಕಾರಿ ಮಂಡಳಿ ಹಾಗು ಸಾಮಾನ್ಯ ಮಂಡಳಿಗಳು ಹೊರಡಿಸಿದ ನಿರ್ಣಯಗಳ ಪ್ರಕಾರ ಲಂಬ ಮೀಸಲಾತಿ ಅವಶ್ಯಕವಲ್ಲ. ಈ ಮಂಡಳಿಗಳ ನಿರ್ಣಯವು, ಕರ್ನಾಟಕದ ವಿದ್ಯಾರ್ಥಿಗಳಿಗೆ 25%ದ ವಿಭಾಗೀಕರಿಸಿದ ಸಮತಲ ಮೀಸಲಾತಿಯನ್ನು ಒಳಗೊಂಡಿರುವ ಎನ್.ಎಲ್.ಎಸ್.ಐ.ಯು ಒಳಗೊಳ್ಳುವಿಕೆ ಹಾಗು ವಿಸ್ತರಣೆ ಯೋಜನೆಯನ್ನು ಅನುಮೋದಿಸುತ್ತದೆ.